8.6 C
New York
April 17, 2021
CINE NEWS Upcoming Movies

ಬಿಲ್ ಗೇಟ್ಸ್ ಕಡೆಯಿಂದ ಫೆಬ್ರವರಿಯಲ್ಲಿ ನಗೆ ಭರಿತವಾದ ಗಿಫ್ಟ್!!!

Bill Gates Kannada Movie

ಬಿಲ್ ಗೇಟ್ಸ್ ಅಂದಾಕ್ಷಣ ನೆನಪಾಗೋದು ಮತ್ಯಾರು ಅಲ್ಲ ಅದು ಅಮೆರಿಕಾದ ಪ್ರತಿಷ್ಠಿತ ಉದ್ಯಮಿ ಬಿಲ್ ಗೇಟ್ಸ್.. ಈ ಬಿಲ್ ಗೇಟ್ಸ್ ಅನ್ನೋ ಹೆಸರಿನಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಒಂದು ಸಿನೆಮಾ ರೆಡಿ ಆಗಿದೆ. ಹಾಗಂತ ಇದು ಬಿಲ್ ಗೇಟ್ಸ್ ಲೈಫ್ ಆಧಾರಿತ ಸಿನೆಮಾ ಅನ್ಕೋಬೇಡಿ.. ಇದೊಂದು ಪಕ್ಕ ಕಾಮಿಡಿ ಸಿನೆಮಾ. ಜೊತೆಗೊಂದಷ್ಟು ಹಾರರ್ ಎಫೆಕ್ಟ್ ಚಿತ್ರದ ಲುಕ್ಕನ್ನು ಮತ್ತಷ್ಟು ಡಬಲ್ ಆಗಿಸಿದೆ. ಹಾಗೆ ಈ ಸಿನೆಮಾ ಇದೇ ಫೆಬ್ರವರಿ ೭ ರಂದು ತೆರೆ ಕಾಣಲಿದೆ.

ಚಿತ್ರದ ಪೋಸ್ಟರ್ , ಟೀಸರ್, ಟ್ರೇಲರ್ ಈಗಾಗ್ಲೇ ಬಿಡುಗಡೆಗೊಂಡಿದೆ.. ಸೂಟು, ಬೂಟು ಹಾಕೊಂಡಿರೋ ಲುಕ್ನಲ್ಲಿ ಕಾಣಿಸಿಕೊಂಡಿರೋ ಕಥಾ ನಾಯಕರು ತಲೆ ಮೇಲೆ ಕಿರೀಟ ಹೊತ್ತು, ಕೈಯ್ಯಲ್ಲೊಂದು ಹಗ್ಗ ಹಿಡಿದು, ಇನ್ನೊಂದು ಕೈಯಲ್ಲಿ ಗಧೆ ಹಿಡಿದು, ಲೆಕ್ಕಾಚಾರಕ್ಕೊಂದು ಪುಸ್ತಕ ಹಿಡಿದಿರುವ ಯಮ ಹಾಗು ಚಿತ್ರಗುಪ್ತನ ಪಾತ್ರದಲ್ಲಿಯೂ ಕಾಣಿಸಿಕೊಳ್ಳುವ ಡಬಲ್ ಶೇಡ್ ನಲ್ಲಿ ಇಬ್ಬರು ಕಥಾ ನಾಯಕರು ಕಾಣಿಸಿಕೊಳ್ಳಲಿದ್ದಾರೆ.

ಅಂದ್ಹಾಗೆ ಈ ಕಥಾ ನಾಯಕರು ಮತ್ಯಾರು ಅಲ್ಲ, ಕಾಮಿಡಿ ಕಿಂಗ್ ಚಿಕ್ಕಣ್ಣ ಅಂಡ್ ಶಿಶಿರ್ ಶಾಸ್ತ್ರೀ. ಚಿಕ್ಕಣ್ಣ ತಮ್ಮ ಕಾಮಿಡಿಯಿಂದಲೇ ಚಂದನವನದಲ್ಲಿ ಗುರುತಿಸಿಕೊಂಡಿರೋ ಕಲಾವಿದ. ಚಿಕ್ಕಣ್ಣ ಇದಾರೆ ಅಂದ್ರೆ ಬಂಡಲ್ಸ್ ಆಫ್ ಕಾಮಿಡಿ ಇರುತ್ತೆ ಅಂತಾನೆ ಅರ್ಥ. ಹಾಸ್ಯ ನಟನಾಗಿ ಇಲ್ಲಿಯವರೆಗೆ ನಗಿಸಿದ್ದ ಚಿಕ್ಕಣ್ಣ ಈಗ ಬಿಲ್ ಗೇಟ್ಸ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ ಅಂದ್ಮೇಲೆ ಚಿತ್ರ ಹಾಸ್ಯ ಪ್ರಧಾನವಾದದ್ದು ಅನ್ನೋದು ಗೊತ್ತಾಗತ್ತೆ ಹಾಗೆಯೇ ಚಿತ್ರದ ಕ್ವಾಲಿಟಿಯು ಮತ್ತಷ್ಟು ಹೆಚ್ಚಿರುತ್ತೆ. ಕಿರುತೆರೆಯ ಧಾರಾವಾಹಿಗಳಲ್ಲಿ ಮೇನ್ ರೋಲ್ನಲ್ಲಿ ನಟಿಸಿರೋ ಶಿಶಿರ್ ಚಿಕ್ಕಣ್ಣನಿಗೆ ಜೋಡಿಯಾಗಿ ಮತ್ತಷ್ಟು ನಗೆ ಬಗ್ಗೆ ಸೃಷ್ಟಿಸಿದ್ದಾರೆ.

ಫುಲ್ ಆಫ್ ಎಂಟರ್‌ಟೈನ್‌ಮೆಂಟ್‌ ಓರಿಎಂಟೆಡ್ ಸಿನೆಮಾದಲ್ಲಿ ಒಳ್ಳೆ ಕಾನ್ಸೆಪ್ಟ್ ಕೂಡಾ ಇದೆಯಂತೆ. ಚಿತ್ರದ ಟ್ರೇಲರ್ ನಲ್ಲಿ ಎದ್ದೂ ಬಿದ್ದು ನಗುವಷ್ಟು ಪಂಚಿಂಗ್ ಡೈಲಾಗ್ ಗಳೂ.. ಭಯ ಹುಟ್ಟಿಸೋ ಹಾರರ್ ಸೀನ್ಸ್ ಗಳೂ ಕ್ಯಾರಿ ಆಗಿದೆ. ಈ ಅದ್ಭುತ ಚಿತ್ರಕ್ಕೆ ಸಿ. ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳಿದರೆ, ವಸಂತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅಕ್ಷರ ರೆಡ್ಡಿ, ರೋಜಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕುರಿ ಪ್ರತಾಪ್, ಗಿರೀಶ್ ಶಿವಣ್ಣ, ರಾಜ್ ಶೇಖರ್, ಪ್ರಿಯಾಂಕಾ ತಾರಾಗಣದಲ್ಲಿದ್ದಾರೆ.

ಭಯಾನಕ ಹಾಸ್ಯ ನಟರೇ ತುಂಬಿಕೊಂಡಿರೋ ಚಿತ್ರ ಬಿಲ್ ಗೇಟ್ಸ್ ಪ್ರತಿ ಮನೆ ಮನೆಯನ್ನೂ ತಲುಪಲಿ ಬಿಲ್ ಗೇಟ್ಸ್ ಶ್ರೀಮಂತಿಕೆ ಚಿತ್ರಕ್ಕೆ ಸಿಗಲಿ..ಚಿತ್ರ ಶತ ದಿನದ ಗಡಿ ದಾಟಲಿ ಅನ್ನೋದೇ ಚಿತ್ರಸಂತೆ ಆಶಯ.

Bill Gates Kannada Trailer

Related posts

Naanu Matthu Gunda (2020) Kannada Trailer

chitrasanthe

ಅಂಬಿ ಹೆಸರಲ್ಲಿ ಚಿಗುರಿತು ಹಸಿರು…

chitrasanthe

ಕೋಟಿಗೊಬ್ಬ 4 ಗೆ ನಡೀತಿದೆ ಭರ್ಜರಿ ತಯಾರಿ

chitrasanthe

Leave a Comment

Skip to toolbar