-1.3 C
New York
March 7, 2021
CINE NEWS LATEST What's Hot

ಹಾಸ್ಯನಟ ಬುಲೇಟ್ ಪ್ರಕಾಶ್ ಇನ್ನಿಲ್ಲ

Bullet Prakash Is No More

ಬೆಂಗಳೂರಿನ‌ ಖಾಸಗಿ‌ ಆಸ್ಪತ್ರೆಯಲ್ಲಿ‌ ಸಾವು

ಸ್ಯಾಂಡಲ್ವುಡ್ ನ ಫೇಮಸ್ ಕಾಮಿಡಿ ನಟ ಬುಲೇಟ್ ಪ್ರಕಾಶ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಲ್ಪ ಹೊತ್ತಿನ‌ಮುಂಚೆ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಬುಲೇಟ್ ಪ್ರಕಾಶ್ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ರು. ಬುಲೆಟ್ ಪ್ರಕಾಶ್ ಅವರು ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಇಂದು ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಲೇಟ್ ಪ್ರಕಾಶ್ ಇಹಲೋಕ ತ್ಯೇಜಿಸಿದ್ದಾರೆ.

ಬುಲೆಟ್ ಪ್ರಕಾಶ್ ಎರಡು ದಿನಗಳ ಹಿಂದೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಪುನೀತ್, ಶಿವಣ್ಣ ಸೇರಿದಂತೆ ಸ್ಯಾಂಡಲ್ವುಡ್ ನ‌ ಬಿಗ್ ಸ್ಟಾರ್ ಗಳ ಜೊತೆ ಎಲ್ಲಾ ಸಿನಿಮಾಗಳಲ್ಲು ಹಾಜರಾಗ್ತಿದ್ದ ಬುಲೇಟ್ ಪ್ರಕಾಶ್ ಕರಿ ಇಡ್ಲಿಯಂದೇ ಫೇಮಸ್. ಸಾಧು ಕೋಕಿಲ‌ ಮತ್ತು ಬುಲೇಟ್ ಜೋಡಿ ಪ್ರತೀ ಸಿನಿಮಾದಲ್ಲೂ ಇರುತ್ತಿತ್ತು. ಈ ಜೋಡಿಯ ಕಾಮಿಡಿ ಮ್ಯಾಜಿಕ್ ಗೆ ನಗದವರೆ ಇಲ್ಲ. ಇತ್ತೀಚೆಗೆ ಅವರ ನಟನೆ ಕಮ್ಮಿಯಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆರೋಗ್ಯ ಸಮಸ್ಯೆ ಹಿನ್ನೆಲೆ ಬುಲೇಟ್ ಪ್ರಕಾರ ನಟನೆಯತ್ತ ಜಾಸ್ತಿ ಹೋಗುತ್ತಿರಲಿಲ್ಲ. ಬುಲೇಟ್ ಪ್ರಕಾಶ್ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

Related posts

ಬಲು “ಅಂದವಾದ” ಟ್ರೈಲರ್..!

chitrasanthe

Maya Bazar Loka Maya Bazaru Kannada Video Song

chitrasanthe

5 Adi 7 Angula (2020) Official Kannada Teaser

chitrasanthe

Leave a Comment

Skip to toolbar