ಸಖತ್ ಪ್ರೊಮೈಸಿಂಗ್ ಆಗಿದೆ ಅಪ್ಪು ನಯಾ ಖದರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು 45ನೇ ಹುಟ್ಟು ಹಬ್ಬದ ಸಂಭ್ರಮ. ಅಪ್ಪು ಬರ್ತ್ ಡೇ ಸ್ಪೆಷಲ್ ಯುವರತ್ನ ಟೀಂ ಡೈಲಾಗ್ ಟೀಸರ್ ಬಿಟ್ಟು ಯುಟ್ಯೂಬ್ ಧೂಳ್ ಮಾಡ್ತಿದೆ. ಈಗ ಬ್ಯಾಕ್ ಟು ಬ್ಯಾಕ್ ಅಪ್ಪು ಜೇಮ್ಸ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಸಖತ್ ಪ್ರೊಮೈಸಿಂಗ್ ಆಗಿದೆ.
JEMS MOTION POSTER
ಭರ್ಜರಿ ಚೇತನ್ ಹಾಗೂ ಪವರ್ ಸ್ಟಾರ್ ಕಾಂಬಿನೇಷನ್ ನಲ್ಲಿ ಬರ್ತಿರೋ ನಯಾ ಖದರ್ ಸಿನಿಮಾ ಜೇಮ್ಸ್. ಟೈಟಲ್ ಮೂಲಕವೇ ಬೇರೆ ಲೆವೆಲ್ ಸಿನಿಮಾ ಅನ್ನಿಸೋ ಜೇಂಸ್ ಮೋಷನ್ ಪೋಸ್ಟರ್ ನೋಡಿ ಪಕ್ಕಾ ಇದು ಹಾಲಿವುಡ್ ಫ್ಲೆವರ್ ಇರೋ ಸಿನಿಮಾ ಎನಿಸ್ತಿದೆ. ಸದ್ಯ ಅಪ್ಪು ಬರ್ತ್ ಡೇ ಸ್ಪೆಷಲ್ ಜೇಮ್ಸ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಹಾಲಿವುಡ್ ರೇಂಜಿನ ಮೇಕಿಂಗ್ ಜಲಕ್ ಎದ್ದು ಕಾಣಿಸ್ತಿದೆ. ಐಶಾರಾಮಿ ಕಾರಿನಲ್ಲಿ ಬಂದು ಇಳಿದು ಎಂಟ್ರಿ ಕೊಡೋ ಪವರ್ ಸ್ಟಾರ್ ನ ಪವರ್ಫುಲ್ ಪೋಸ್ ಸಖತ್ ರಿಚ್ ಆಗಿದೆ.
JEMS MOTION POSTER
ಹಾಲಿವುಡ್ ಸ್ಟೈಲ್ ಮೇಕಿಂಗ್ ಜೊತೆಗೆ ಹಾಲಿವುಡ್ ರೇಂಜ್ ಚರಣ್ ಟ್ಯೂನ್ ಮೋಷನ್ ಪೋಸ್ಟರ್ ನ ಮತ್ತೊಂದು ಹೈಲೈಟ್. ಈಗಾಗಲೇ ಪಾಪ್ ಕಾರ್ನ್ ಮಂಕೀ ಟೈಗರ್ ಸಿನಿಮಾದ ಮಾದೇವಾ ಸಾಂಗ್ ಮೂಲಕ ಹಾಲಿವುಡ್ ಮ್ಯೂಜಿಕ್ ಫ್ಲೆವರ್ ಪರಿಚಯಿಸಿರೋ ಚರಣ್ ರಾಜ್ ಪವರ್ ಸ್ಟಾರ್ ನ ಜೇಮ್ಸ್ ಸಿನಿಮಾದ ಮೂಲಕ ಮತ್ತೊಂದು ಲೆವೆಲ್ ನ ಸಂಗೀತ ನೀಡ್ತಿದ್ದಾರೆ.
ಸಿನಿಮಾದ ಹೈ ವೋಲ್ಟೇಜ್ ತೂಕದಂತೆ ಸಿನಿಮಾದ ಹಾಡುಗಳೂ ಕೂಡ ಮುಖ್ಯ ಪಾತ್ರವಹಿಸಲಿವೆ. ಸದ್ಯ ಜೇಮ್ಸ್ ಸಿನಿಮಾದ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಪವರ್ ಸ್ಟಾರ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಹಾಲಿವುಡ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಜೇಮ್ಸ್
James (2020) Official Kannada Motion Poster