8.6 C
New York
April 17, 2021
CINE NEWS Reviews

ಕಾಣದಂತೆ ಮಾಯವಾದನು ಬಲೆಗೆ ಪ್ರೇಕ್ಷಕರು ಸೆರೆ..

Kaanadante Maayavadanu Kannada Movie

ವರ್ಷದ ಆರಂಭದ ದಿನಗಳಲ್ಲೇ ಹಲವು ಚಿತ್ರಗಳು ತೆರೆ ಕಂಡಿದೆ. ಎಲ್ಲ ಸಿನಿಮಾಗಳಲ್ಲೂ ಹಾರಾರ್, ಥ್ರಿಲ್ಲರ್, ರೋಮ್ಯಾನ್ಸ್, ಲವ್, ಆಕ್ಷನ್, ಸಸ್ಪೆನ್ಸ್ ಎಲಿಮೆಂಟ್ಸ್ ಇರೋದು ಕಾಮನ್. ಈ ಚಿತ್ರದಲ್ಲೂ ಹಾಗೆ ಇವೆಲ್ಲವೂ ಬೆರೆತುಕೊಂಡಿದೆ ಆದ್ರೆ ಈ ವರೆಗೆ ತೆರೆಕಂಡ ಎಲ್ಲ ಸಿನಿಮಾಗಳಿಗಿಂತ ಈ ಚಿತ್ರ ಹೆಚ್ಚು (ವಿ)ಭಿನ್ನ ಅಂತಾನೇ ಹೇಳ್ಬೋದು… ಆ ಡಿಫರೆಂಟ್ ಸಿನಿಮಾವೇ ‘ ಕಾಣದಂತೆ ಮಾಯವಾದನು’.

ಯೆಸ್, ಕನ್ನಡ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯತ್ನದ ಮೂಲಕ ಮೂಡಿಬಂದ ಸಿನೆಮಾ ಕಾಣದಂತೆ ಮಾಯಾವಾದನು ಇಂದು ತೆರೆ ಮೇಲೆ ಅಬ್ಬರಿಸುತ್ತಿದೆ. ತನ್ನದೇ ಶೈಲಿಯಲ್ಲಿ ಹೆಜ್ಜೆ ಇಡುತ್ತೀರೋ ಸಿನೆಮಾ ತನ್ನ ಬಿಡುಗಡೆಗು ಮೊದಲೇ ಟ್ರೈಲರ್, ಟೀಸರ್, ಪೋಸ್ಟರ್ ಮೂಲಕ ಸಕ್ತ್ ಟಾಕ್ ಕ್ರಿಯೇಟ್ ಮಾಡಿತ್ತು ಸಿನೆಮಾ, ಟ್ರೈಲರ್‌ನಲ್ಲಿ ಕಥೆಯ ಸಣ್ಣ ಝಲಕ್ ಬಿಟ್ಟು ಕೊಟ್ಟಿದ್ದ ಸಿನೆಮಾಕ್ಕಿಂದು ಮೊದಲ ದಿವಸ.

ಚಿತ್ರದ ಆರಂಭದಲ್ಲೇ ಕಥಾ ನಾಯಕನ್ನು ಸಾಯಿಸಲಾಗುತ್ತದೆ. ನಂತರದ ಮುಂದುವರೆದ ಭಾಗವೇ ಸಿನೆಮಾದ ಫ್ಲೋಟ್. ಅಲೌಕಿಕ ಸಂಗತಿಗಳ ಹೂರಣ ಈ ಕಾಣದಂತೆ ಮಾಯವಾದನು. ಕಥೆಯನ್ನು ನಿರ್ದೇಶಕರು ಸಿರೂಪಿಸಿರುವ ಶೈಲಿ ತುಂಬಾ ಸೊಗಸಾಗಿದೆ. ಈ ಉತ್ತಮವಾದ ಶೈಲಿಯೇ ಕಥೆಗೆ ಇನ್ನೊಂದಷ್ಟು ಸ್ಟ್ರಾಂಗ್ ಬೇಸ್ ಒದಗಿಸಿದೆ. ಸ್ಕ್ರೀನ್ ಪ್ಲೇ ಅಂತೂ ನಿಜಕ್ಕೂ ಅದ್ಭುತ.

ಕಥೆಯ ಆರಂಭದಿಂದಲೂ ಯಥಾವತ್ತಾಗಿ ಒಂದೊಂದೇ ಪಾತ್ರಗಳು ಗೊಂದಲವಿಲ್ಲದೆ ಪ್ರೇಕ್ಷಕನಿಗೆ ಪರಿಚಯವಾಗುತ್ತ ಹೋಗುತ್ತದೆ. ಸತ್ತು ಹೋದ ನಾಯಕನ ಆತ್ಮ ಮತ್ತು ಆತ್ಮದೊಂದಿಗೆ ನಾಯಕಿಯ ಪ್ರೀತಿಯ ಅಂಶಗಳು ಚಿತ್ರದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಸ್ಯ, ಆಕ್ಷನ್, ಲವ್, ಹಾರರ್ ಸನ್ನಿವೇಶಗಳೇ ಚಿತ್ರದ ದೊಡ್ಡ ಥ್ರಿಲ್ಲರ್ ಎಲಿಮೆಂಟ್ಸ್. ಚಿತ್ರದ ಸೆಟ್ಟಿಂಗ್ ಸೂಪರ್, ಎಡಿಟಿಂಗ್ ಎಕ್ಸಲೆಂಟ್, ಮೇಕಿಂಗ್ ಫೆಂಟಾಸ್ಟಿಕ್ ಟೋಟಲ್ ಸಿನೆಮಾ ಅಮೇಜಿಂಗ್. ಚಿತ್ರದಲ್ಲಿ ನಿರ್ದೇಶಕರ ಸಹಿತ ಟೆಕ್ನಿಕಲ್ ಟೀಮ್ ಶ್ರಮ ಎದ್ದು ಕಾಣಿತ್ತದೆ. ಸಂಗೀತವು ಬೆನ್ನೆಲುಬಾಗಿ ನಿಂತಿದೆ. ಹಾಸ್ಯದಲ್ಲಿ ಟ್ರಕ್ ಡ್ರೈವರ್ ಆಗಿ ಕಾಣಿಸಿಕೊಂಡಿರೋ ಧರ್ಮಣ್ಣ ಚಿತ್ರದ ಮತ್ತೊಬ್ಬ ಕೇಂದ್ರ ಬಿಂದು.

ನಾಯಕಿಯಾಗಿ ಕಾಣಿಸಿಕೊಂಡಿರೋ ಸಿಂಧು ಎಮೋಶನಲ್ ಬಿಟ್ಸ್ ಗಳನ್ನು ಚೆನ್ನಾಗಿ ಡ್ರಾಪ್ ಮಾಡಿದ್ದಾರೆ. ನಾಯಕ ವಿಕಾಸ್ ಚಿತ್ರದ ಜರ್ನಿಯುದ್ದಕ್ಕೂ ತಮ್ಮ ಪಾತ್ರದಲ್ಲಿ ಮುಳುಗೆದ್ದಿದ್ದಾರೆ. ಸೀನಿಯರ್ ಆಕ್ಟರ್ ಅಚ್ಯುತ್ ಕುಮಾರ್ ಅವರ ಸೀನಿಯರ್ ಗೋಸ್ಟ್ ಪಾತ್ರದ ಅವತಾರ ಚೆನ್ನಾಗಿ ಮೂಡಿಬಂದಿದೆ. ಬೇಸರವಿಲ್ಲದೆ ಪ್ರೇಕ್ಷಕ ಒಂದಷ್ಟು ಬೆಸ್ಟ್ ಎಂಟರ್ಟೈನ್ಮೆಂಟ್ ಮೂಮೆಂಟನ್ನು ತಪ್ಪದೆ ಎತ್ತಿಕೊಂಡು ಹೋಗುತ್ತಾನೆ. ಡಿಫರೆಂಟ್ ಕಂಟೆಂಟ್, ಮಿಕ್ಸೆಡ್ ಕಾನ್ಸೆಪ್ಟ್, ಫುಲ್ ಆಫ್ ಎಂಟರ್ಟೈನ್ಮೆಂಟ್ ಬಯಸುವವರು ನೋಡಲೇಬೇಕಾದ ಸುಂದರ ಕಥಾ ಹಂದರ.

Kaanadante Maayavadanu Kannada Teaser

ಒಂದು ಸುಂದರವಾದ ಲವ್ ಸ್ಟೋರಿ, ಡಿಫ್ರೆಂಟ್ ವೇನಲ್ಲಿ ಕಾಣದಂತೆ ಮಾಯವಾದನು

Related posts

Shiva (2020) Official Kannada Trailer

chitrasanthe

Bicchugatthi Chapter 1 – Making Video

chitrasanthe

Light Agi Love Agide Kannada Trailer

chitrasanthe

Leave a Comment

Skip to toolbar