-1.3 C
New York
March 7, 2021
CINE NEWS

ಸಿಎಂ ಪರಿಹಾರ ನಿಧಿಗೆ ಸುಮಲತಾ ಹಸ್ತ

Sumalatha Ambareesh

ಎರಡು ಲಕ್ಷ ನೀಡಿದ ಮಂಡ್ಯ ಗೌಡ್ತಿ

ದೇಶಾದ್ಯಂತ ಕೊರೋನ‌ ಭೀತಿ ದಿನೇ ದಿನೇ ಹೆಚ್ಚಾಗ್ತಿದೆ. ಕೊರೋನ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಈಗಾಗಲೇ ದೇಶದಲ್ಲಿ 16 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. 700ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಕೆ ಸರ್ಕಾರ ಶತಾಯಗತಾಯ ಸಾಕಷ್ಟು ಶ್ರಮವಯಿಸ್ತಿದೆ. ಡಾಕ್ಟರ್ ಗಳು, ಪೊಲೀಸರು, ಮಾಧ್ಯಮದವರು ಸದಾ ಕೊರೋನ ಭಿತಿಯಲ್ಲೂ ಹಗಲು ರಾತ್ರಿ ಶ್ರಮಿಸ್ತಿದ್ದಾರೆ. ಕೊರೋನ ಭೀತಿ ಹಿನ್ನಲೆ ಲಾಕ್ ಡೌನ್ ಆಗಿರೋ ಕಾರಣ ಸಾಕಷ್ಟು ಸಾಕಷ್ಟು ಹಣದ ಅಗತ್ಯವಿದೆ. ಸರ್ಕಾರದ ಜೊತೆ ಕೈಜೋಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದರು.

ಮುಖ್ಯಂಮತ್ರಿಯ ಈ ಬೇಡಿಕೆಗೆ ಸಾಕಷ್ಟು ಕಡೆಯಿಂದ ಪ್ರತಿಕ್ರಿಯೆ ಬರ್ತಿದ್ದು, ದುಡ್ಡಿದ್ದ ಶ್ರೀಮಂತರೆಲ್ಲಾ ಧನಸಹಾಯ ಮಾಡ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಂಸದೆ, ನಟಿ ಸುಮಲತಾ ಅಂಬರೀಶ್ ತಮ್ಮ 2 ತಿಂಗಳ ಸಂಬಳ ಅಂದರೆ 2 ಲಕ್ಷ ರೂಪಾಯಿಯನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಎರಡು ತಿಂಗಳ ವೇತನವನ್ನು ಪ್ರಧಾನಮಂತ್ರಿ ತುರ್ತು ಪರಿಹಾರ ನಿಧಿಗೆ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಮಿಮ್ಸ್ ಗೆ ಕೊರೊನ ವಿರುದ್ಧ ಹೊರಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50, 00, 000 ಲಕ್ಷ ರೂ. ಗಳನ್ನು ನೀಡಿದ್ದು, ಈಗ ಮುಖ್ಯಮಂತ್ರಿ ಪರಿಹಾರ ನಿಧಿಗೂ ಸಹಾಯ ಅಸ್ತ ನೀಡಿದ್ದಾರೆ.

Related posts

Prarambha Hode Nee Hode Video Song

chitrasanthe

ಸಲಗದ ದಾರಿಗೆ ಹೆಗಲಾದ ಟಗರು ಟೀಮ್

chitrasanthe

Local Train Lucky Lucky Video Song

chitrasanthe

Leave a Comment

Skip to toolbar