ಕನ್ನಡ ಸಿನೆಮಾಗಳ ಪಟ್ಟಿ ಆಂಜನೇಯನ ಬಾಲದಂತೆ ದಿನ ದಿನಕ್ಕೂ ಬೆಳೆಯುತ್ತಲೇ ಇರುತ್ತೆ. ಹೆಚ್ಚಾಗ್ತಿರೋ ಸಿನೆಮಾಗಳ ಸಂಖ್ಯೆಯ ಜೊತೆ ಹೊಸತೊಂದು ಕಥೆಗಳೂ ಚಂದನವನದ ಮಡಿಲಿಗೆ ಪುಟ್ಟ ಕೂಸಿನಂತೆಯೇ ಸರಿ ಅನ್ನಿಸುತ್ತೆ. ಇಲ್ಲೊಂದು ಸಿನೆಮಾ ಇಮ್ಯಾಜಿನೇಷನ್ಗೆ ಸಿಗದ ಅಮೇಜಿಂಗ್ ಕಥೆಯೊಂದಿಗೆ ಮೈ ನೇಮ್ ಈಸ್ ರಾಜ ಅನ್ನೋ ಹೆಸರಿನೊಂದಿಗೆ ತರೆ ಸರಿಸಲು ಸಿದ್ಧವಾಗಿದೆ.
My Name is Raja Team
ಯೆಸ್, ಇದೊಂದು ಗ್ಲಾಮರಸ್ ವಿತ್ ಹಾರರ್ ಕಾಂಬಿನೇಷನ್ನಲ್ಲಿ ಬರಲಿರುವ ಸಿನೆಮಾ. ಚಿತ್ರದ ಟ್ರೇಲರ್ ಅಂತೂ ಚಿಂದಿ ಎಬ್ಬಿಸಿದೆ. ರೊಮ್ಯಾಂಟಿಕ್ ಜೊತೆ ಬೆರೆತ ಒಂದಷ್ಟು ಹಾರರ್ ಸೀನ್ಸ್ ಭಯ ಹುಟ್ಟಿಸದೇ ಇರಲಾರದು. ಇದರ ಜೊತೆ ಮತ್ತೊಂದಷ್ಟು ಸಾಂಗ್ ಧಮಾಕ ಬಾರಿಸೋದ್ರಲ್ಲಿ ಡೌಟೇ ಇಲ್ಲ. ಪಡ್ಡೆ ಹುಡುಗರ ಬೆವರಿಳಿಸುವ ಸಾಂಗ್ನಲ್ಲಿ ಬಾಂಬೆ ಬೆಡಗಿ ಆಕರ್ಷಿಕಾ ಅಂಡ್ ನಜ಼ರೀನ ರಾಜ್ ಸುರಿಯನ್ ಗೆ ಜೊತೆಯಾಗಿದ್ದಾರೆ. ಇದು ನನ್ನ ಮೊದಲ ಸಿನೆಮಾ ಅದ್ಭುತವಾದ ಸಂಗೀತವಿದೆ. ಇದೊಂದು ಪಕ್ಕಾ ಪೈಸಾ ವಸೂಲ್ ಮೂವಿ ತುಂಬಾ ಚೆನ್ನಾಗಿ ಸಿನೆಮಾ ಎಕ್ಸಿಕ್ಯೂಷನ್ ಮಾಡಿದ್ದೇವೆ. ತುಂಬಾ ವಿಭಿನ್ನವಾದ ಕಥೆ ಇದೆ. ಇದೊಂದು ಪಕ್ಕಾ ಎಂಟರ್ಟೈನ್ಮೆಂಟ್ ನೀಡೋ ಸಿನೆಮಾ ಎಂದಿದ್ದಾರೆ ನಿರ್ದೇಶಕ ಅಶ್ವಿನ್ ಕೃಷ್ಣ. ಸಿನೆಮಾ ತುಂಬಾ ಅದ್ದೂರಿಯಾಗಿದೆ. ಸಿನೆಮಾದಲ್ಲಿ ಒಳ್ಳೊಳ್ಳೆ ಸನ್ನಿವೇಶಗಳಿದೆ. ಚಿತ್ರದಲ್ಲಿ ಯಾವುದಕ್ಕೂ ಕಡೆಮೆ ಇಲ್ಲ. ಮನೆರಂಜನೆಯ ಎಲ್ಲಾ ಕಂಟೆಂಟ್ ಗಳೂ ಚಿತ್ರದಲ್ಲಿ ಕ್ಯಾರಿ ಆಗಿದೆ. ಸಾಂಗ್ ಗಳು ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ ನಿರ್ಮಾಪಕ ಪ್ರಭುಸೂರ್ಯ.
Prabhu Raaj Suriyan
ಅನುಬಂಧ, ಗಂಡ ಹೆಂಡತಿ ಸಂಬಂಧವನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. ಎಲ್ಲರ ಪಾತ್ರಕ್ಕೂ ಪ್ರತ್ಯೇಕ ಮತ್ತು ವಿಶೇಷ ಮಹತ್ವವಿದೆ ಎಂದಿದ್ದಾರೆ ನಾಯಕ ನಟ ರಾಜ್ ಸುರಿಯನ್. ಇದು ನನ್ನ ಮೊದಲ ಸಿನೆಮಾ..3 ವಿಭನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ.ಸ್ಟೋರಿ ತುಂಬಾ ಚೆನ್ನಾಗಿದೆ..ತುಂಬಾ ಬೋಲ್ಡ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದಿದ್ದಾರೆ ನಟಿ ಆಕರ್ಷಿಕಾ. ಚಿತ್ರದಲ್ಲಿ 4 ಸಾಂಗ್ ಇದೆ. ಸಂಜಿತ್ ಹೆಗ್ಡೆ, ಚೇತನ್, ಅಭಿನಂದನ್ ಸಂಗೀತಕ್ಕೆ ವಾಯ್ಸ್ ನೀಡಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ ಎಂದಿದ್ದಾರೆ ಸಂಗೀತ ನಿರ್ದೇಶಕ ಎಲ್ವಿನ್ ಜೋಶುವಾ.
My Name is Raja Team
ಈಗಾಗ್ಲೆ ಅದ್ದೂರಿಯಾಗಿ ಟ್ರೇಲರ್ ಅಂಡ್ ಆಡಿಯೋ ರಿಲೀಸ್ ಮಾಡಿರುವ ಚಿತ್ರ ತಂಡ ಇದೇ ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನೂ ತರೆಮೇಲೆ ತರಲು ಸಿದ್ಧವಾಗಿದೆ. ಡಿಫ್ರೆಂಟ್ ಕಥಾನಕದೊಂದಿಗೆ ರಲೀಸ್ ಗೆ ಸಜ್ಜಾಗಿರೋ My name is Raja ತಂಡಕ್ಕೆ ಶುಭವಾಗಲಿ. ಚಿತ್ರ ಶತದಿನದ ಸಂಭ್ರಮ ಆಚರಿಸಲಿ ಅನ್ನೋದೆ ಚಿತ್ರಸಂತೆ ಆಶಯ
My Name Is Raja Kannada Movie Motion Poster
My Name Is Raja Romantic Teaser