ಕನ್ನಡ ಚಿತ್ರರಂಗದಲ್ಲಿ ಬೇಕಾದಷ್ಟು ಸಿನೆಮಾಗಳು ಜನ್ಮ ತಾಳುತ್ತಿದೆ. ಆದರೆ ಜನಕ್ಕೆ ಯಾವ ತರದ ಸಿನೆಮಾಗಳು ಬೇಕು ಅಂತ ಆಡಿಯನ್ಸ್ ಇಂಟರೆಸ್ಟ್ ಸ್ಟಡಿ ಮಾಡ್ಕೊಂಡು ಅದಕ್ಕೆ ತಕ್ಕ ಸಿನೆಮಾ ರೆಡಿ ಮಾಡಿ ಸ್ಯಾಟಿಸ್ಫ್ಯಾಕ್ಷನ್ ನೀಡೋದಿದೆಯಲ್ಲ ನಿಜಕ್ಕೂ ತುಂಬಾ ಸೂಕ್ಷ್ಮವಾಗಿ ಎಲ್ಲವನ್ನು ಗ್ರಹಿಸುವ ಪವರ್ ಇರ್ಬೇಕಾಗತ್ತೆ. ಅಂಡ್ ಅಷ್ಟೇ ತಾಳ್ಮೆ, ಡೆಡಿಕೇಶನ್, ಕ್ರಿಯೇಟಿವ್ನೆಸ್ ಎಲ್ಲವೂ ಬೇಕಾಗತ್ತೆ. ಇವೆಲ್ಲವನ್ನೂ ಗಮನಿಸಿದ ಚಿತ್ರ ತಂಡ ಒಂದು ಆಡಿಯೆನ್ಸ್ ಓರಿಎಂಟೆಡ್ ಸಿನೆಮಾ ಸಿದ್ಧ ಮಾಡಿದೆ. ಅದೇ my name is raja.
Raaj Suriyan
ಈ ಸಿನೆಮಾದ ಪೋಸ್ಟರ್, ಟ್ರೈಲರ್, ರೋಮ್ಯಾಂಟಿಕ್ ಟೀಸರ್ ಈಗಾಗ್ಲೇ ಬಿಡುಗಡೆಗೊಂಡಿದ್ದು, ಸಕತ್ ಹವಾ ಕ್ರಿಯೇಟ್ ಮಾಡಿದೆ. ವಯಸ್ಸಿನ ಹುಡುಗರ ಫೆವರೇಟ್ ಸಿನೆಮಾ ಆಗೋದ್ರಲ್ಲಿ my name is raja ನೇ ಮೊದಲಿರತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.. ಈ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ ಚಿತ್ರದ ನಾಯಕ ನಟ ರಾಜ್ ಸೂರಿಯನ್. ಹಾರಾರ್, ಥ್ರಿಲ್ಲರ್, ರೋಮ್ಯಾನ್ಸ್, ಲವ್, ಆಕ್ಷನ್, ಸಸ್ಪೆನ್ಸ್ ಎಲ್ಲವು ಚಿತ್ರದಲ್ಲಿದೆ. ಟೋಟಲಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜ್ ಸಿನೆಮಾ ಮೈ ನೇಮ್ ಈಸ್ ರಾಜ. ಈಗಿನ ಜನರೇಷನ್ಗೆ ಇಷ್ಟವಾಗೋ ಕಂಟೆಂಟ್ ಚಿತ್ರದಲ್ಲಿದೆ. ಜನರು ಎಲ್ಲಕ್ಕಿಂತ ಹೆಚ್ಚಾಗಿ ಎಂಟರ್ಟೈನ್ಮೆಂಟ್ ನಿರೀಕ್ಷಿಸುತ್ತಾರೆ. ಹಾಗಾಗಿ ಪ್ರೇಕ್ಷಕವರ್ಗದ ಹಿತಾಸಕ್ತಿಗೆ ಆದ್ಯತೆ ನೀಡಿ ಎಂಟರ್ಟೈನ್ಮೆಂಟ್ ಓರಿಎಂಟೆಡ್ ಸಿನೆಮಾ ಮಾಡಿದ್ದೇವೆ.
Raaj Suriyan Raaj Suriyan and Akasrhika Goyal
ನನ್ನ ಪಾತ್ರ ೩ ಶೇಡ್ನಲ್ಲಿ ರನ್ ಆಗಿದೆ. ಮೊದಲು ಲವರ್ ಬಾಯ್ ಆಗಿ ನಂತರ, ಗಂಡನಾಗಿ ಫ್ಲಾಶ್ ಬ್ಯಾಕಲ್ಲಿ ಒಂದು ಪಾತ್ರ ಹೀಗೆ ವಿಭಿನ್ನವಾದ ಶೇಡ್ಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರಕ್ಕೆ ನನ್ನ ತಮ್ಮನೂ ಬಂಡವಾಳ ಹೂಡಿದ್ದಾನೆ. ನಮ್ಮ ಕೊಂಬಿನೇಷನ್ನಲ್ಲಿ, ನಮ್ಮ ಪ್ರೋಡ್ಯೂಕ್ಷನ್ನಲ್ಲಿ ಮೂಡಿಬರುತ್ತಿರುವ ೩ನೇ ಸಿನೆಮಾ ಇದು. ಈ ಮೊದಲು ಸಂಚಾರಿ, ಜಟಾಯು ಸಿನೆಮಾಗಳು ನಮ್ಮ ಪ್ರೊಡಕ್ಷನ್ ನಲ್ಲಿಯೇ ಬಂದಿದೆ. ಈ ಚಿತ್ರವೂ ನಮ್ಮ ಪ್ರೊಡಕ್ಷನ್ನಲ್ಲಿಯೇ ಲಾಂಚ್ ಆಗಲಿದೆ. ಹಾಗೆ ಚಿತ್ರ ಇದೇ ಫೆಬ್ರವರಿ ಎರಡು ಅಥವಾ ಮೂರನೇ ವಾರ ತೆರೆ ಕಾಣಲಿದೆ ಎಂದಿದ್ದಾರೆ ರಾಜ್.
Raaj Suriyan Raaj Suriyan
ಶೂಟಿಂಗ್ ಆಗುವ ಮೊದಲು ಪ್ರತಿ ಸೀನ್ ಅನ್ನೂ ರಿಹರ್ಸಲ್ ಮಾಡಿದ್ದೇವೆ. ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರೋ ಇಬ್ಬರೂ ಬಾಂಬೆ ಮೂಲದವರು, ಅವರಿಗೆ ಕನ್ನಡ ಬರುತ್ತಿರಲಿಲ್ಲ ಹಾಗಾಗಿ ಮೊದಲೇ ಪ್ರಾಕ್ಟಿಸ್ ಮಾಡಿಕೊಳ್ಳುತ್ತಿದ್ದೆವು. ಹಾಗಾಗಿ ಕ್ಯಾಮೆರಾ ಮುಂದೆ ಅಷ್ಟೇನೂ ಕಷ್ಟ ಅನ್ನಿಸಲಿಲ್ಲ ಎಂದಿದ್ದಾರೆ. ಕನ್ನಡ ಸಿನಿಮಾ ತೆಲುಗಿನಲ್ಲೂ ತೆರೆ ಕಾಣುತ್ತಿರುವುದು ಹೆಮ್ಮೆಯ ವಿಚಾರ. ಹಾಗೆ ಬೋಲ್ಡ್ ಆಗಿ ಸಿನೆಮಾ ಮಾಡೋ ನಾಯಕ ನಾಯಕಿಯರು ರಂಗಕ್ಕೆ ಬೇಕೇ ಬೇಕು. ಈ ಚಿತ್ರದಲ್ಲಿ ರಾಜ್ ಅವರು ಅಕ್ಷರಶಃ ರಾಜನಾಗಿಯೇ ಮೆರೆದಿದ್ದಾರೆ ಅನ್ನೋದು ಟ್ರೈಲರ್ ನಲ್ಲೇ ಪ್ರೂವ್ ಮಾಡಿದ್ದಾರೆ. ರಾಜ್ ಈ ಚಿತ್ರದ ಮೂಲಕ ಚಂದನ ವನದಲ್ಲಿ ಮತ್ತೆ ಕಾಣಿಸಿಕೊಂಡಿರೋದು ಮತ್ತೊಂದು ಖುಷಿ.
My Name is Raja Team
ಏನೇ ಇರ್ಲಿ, ಸ್ಯಾಂಡಲ್ವುಡ್ನಲ್ಲಿ ರಾಜ್ ಸೂರಿಯನ್ ಅನ್ನೋ ಸಮರ್ಥ ನಾಯಕ ಸೂರ್ಯನಂತೆಯೇ ಪ್ರಜ್ವಲಿಸಲಿ, ನೂರಾರು, ಸಾವಿರಾರು ಚಿತ್ರಗಳು ಈ ಕಲಾವಿದನಿಂದ ಹೊರಹೊಮ್ಮಲಿ.. my name is raja ಹಂಡ್ರೆಡ್ ಪ್ಲಸ್ ಡೇಸ್ ಗಡಿದಾಟಲಿ ಅನ್ನೋದೇ ಚಿತ್ರಸಂತೆ ಆಶಯ.
My Name Is Raja Kannada Movie Motion Poster
My Name Is Raja Romantic Teaser
My Name Is Raja (2020) Kannada Trailer
ಹಾರರ್ ಜೊತೆಗೆ ರೊಮ್ಯಾಂಟಿಕ್ ಮೂಡಿನಲ್ಲಿ ಬರ್ತಿದೆ ಮೈ ನೇಮ್ ಇಜ್ ರಾಜ್!!!