ಈ ಬಣ್ಣದ ಲೋಕವೇ ಹಾಗೆ ಒಮ್ಮೆ ಬಣ್ಣ ಹಚ್ಚಿದರೆ ಮತ್ತೆ ಮತ್ತೆ ಬಣ್ಣ ಹಚ್ಚಲೇ ಬೇಕು. ಬಾಲನಟಿಯಾಗಿ ಬಣ್ಣ ಹಚ್ಚಿದ ನಟಿಯರು ಎಷ್ಟೋ ಜನ ಮತ್ತೆ ಕಮ್ ಬ್ಯಾಕ್ ಆಗಿ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಗಳಾಗಿ ಮೆರೆದಿದ್ದಾರೆ. ಮಲಾಶ್ರೀ, ರೂಪಿಕಾ, ಅಮೂಲ್ಯ ಸೇರಿದಂತೆ ಹಲವು ನಟಿಯರು ಬಾಲನಟಿಯರಾಗಿ, ನಂತರ ಹಿರೋಯಿನ್ ಆಗಿ ಸ್ಯಾಂಡಲ್ವುಡ್ ಮೆರೆದವರು. ಅದರಂತೆ ಮತ್ತೊಬ್ಬ ಸ್ಯಾಂಡಲ್ವುಡ್ ನ ಬಾಲನಟಿ ಬಿಂದುಶ್ರೀ ಸ್ಯಾಂಡಲ್ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದು, ಲಡ್ಡು ಅನ್ನೋ ಹೊಸ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ತಿದ್ದಾರೆ ಬಿಂದುಶ್ರೀ.
ಅಮ್ಮನ ಕನಸು ನನಸು ಮಾಡೋಕೆ ಮತ್ತೆ ಬಂದ ಬಿಂದುಶ್ರಿ
ರಮೇಶ್ ಅರವಿಂದ್ ಅಭಿನಯದ ಸೂಪರ್ ಹಿಟ್ ಸಿನಿಮಾ ಶ್ರೀರಾಸ್ತು ಶುಭಮಸ್ತು, ಬಿ.ಸಿ ಪಾಟೀಲ್ ರ ಶಿವಪ್ಪನಾಯಕ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದ ಬಿಂದುಶ್ರೀ ಈಗ ಮತ್ತೆ ಲಡ್ಡು ಸಿನಿಮಾದ ಮೂಲಕ ಬಣ್ಣದ ಬದುಕಿಗೆ ರೀ ಎಂಟ್ರಿ ಕೊಡ್ತಿದ್ದಾರೆ. ಏಳನೆ ತರಗತಿ ಓದುವ ತನಕ ಬಾಲನಟಿಯಾಗಿ ನಟಿಸ್ತಿದ್ದ ಬಿಂದುರನ್ನ ಅವರ ತಂದೆ ತಮ್ಮ ಮಗಳು ಓದಿ ವಿದ್ಯಾವಂತೆಯಾಗಬೇಕು ಅಂತಾ ನಟನೆಗೆ ಫುಲ್ ಸ್ಟಾಪ್ ಇಟ್ಟು ಸ್ಕೂಲು, ಕಾಲೇಜ್ ಕಡೆ ಗಮನ ಹರಿಸಿದ್ರು.
ಬಿಂದು ಅಮ್ಮನಿಗೆ ತಮ್ಮ ಮಗಳು ಒಳ್ಳೆ ನಟಿಯಾಗಬೇಕು, ಬಿನ್ನ ವಿಭಿನ್ನ ಪಾತ್ರಗಳಲ್ಲಿ ಕಾಣಿಸಬೇಕು ಅಂತಾ ತಮ್ಮ ಆಸೆಯನ್ನ ವ್ಯೆಕ್ತಪಡಿಸಿದ್ರು. ಆದರೆ ಬಿಂದು ಅವರ ತಂದೆ ತಮ್ಮ ಮಗಳ ವಿಧ್ಯೆಗಾಗಿ ನಟನೆಯಕಡೆ ಗಮನ ಹರಿಸದಂತೆ ಕಾಲೇಜುಕಡೆಯೆ ಒತ್ತು ಕೊಟ್ಟರು. ಸದ್ಯ ಇಂಜಿನಿಯರಿಂಗ್ ಮುಗಿಸಿ, ಕರ್ನಾಟಕದಲ್ಲಿ 16ನೇ ರ್ಯಾಂಕ್ ಪಡೆದು ಅಪ್ಪನ ಕೀರ್ತಿ ಮೆರೆದ ಮಗಳು ಈಗ ಅಮ್ಮನ ಕನಸನ್ನ ನನಸು ಮಾಡೋಕೆ ಮತ್ತೆ ಬಣ್ಣ ಹಚ್ತಿದ್ದಾರೆ.
ಬಣ್ಣ ಹಚ್ಚಿದ್ದೇ ತಡ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಜಿ.
ಇನ್ನು ಬಿಂದು ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ. ಸದ್ಯ ಲಡ್ಡು ಸಿನಿಮಾದ ಮೂಲಕ ತೆರೆಗೆ ಬರೋಕೆ ರೆಡಿಯಾಗಿರೋ ಬಿಂದು,ಅಸುರ ಸಂಹಾರ,ರಾಜನು ರಾಣಿಯು Mr and Mrs ಜಾನು ಸೇರಿದಂತೆ ನಾಲ್ಕೈದು ಪ್ರಾಜೆಕ್ಟ್ ಗಳಲ್ಲಿ ಬ್ಯುಜಿಯಾಗಿದ್ದಾರೆ. ಈ ಬಗ್ಗೆ ಚಿತ್ರಸಂತೆ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡ ಬಿಂದು, ಬಾಲನಟಿಯಾಗಿದ್ದ ನನಗೆ ನಟನೆ ಅಂದ್ರೆ ತುಂಬಾ ಇಷ್ಟ. ನಾನು ನಟಿಯಾಗಬೇಕು ಅನ್ನೋದು ನಮ್ಮ ಅಮ್ಮನ ಆಸೆ ಕೂಡ. 7ನೇ ತರಗತಿ ನಂತರ ಸ್ಕೂಲ್, ಕಾಲೇಜ್ ಕಡೆ ಗಮನ ಕೊಟ್ಟೆ, ಇಂಜಿನಿಯರಿಂಗ್ ಮುಗಿಸಿ ಸ್ವಲ್ಪ ದಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಮೇಲೆ ಮೇಲೆ ಚಿತ್ರರಂಗದಿಂದ ಆಫರ್ ಗಳು ಬಂದ್ವು. ನನಗೂ ನಟನೆ ತುಂಬಾ ಇಷ್ಟ. ಅಮ್ಮನ ಆಸೆ ಕೂಡ. ಹಾಗಾಗಿ ಮತ್ತೆ ಒಪ್ಪಿಕೊಂಡು ನಟಿಸ್ತಿದ್ದೇನೆ ’’ ಅಂತಾರೆ.
ಏನೆ ಆಗ್ಲೀ ಬಣ್ಣದ ಬದುಕೇ ಹಾಗೆ ಒಮ್ಮೆ ಬಣ್ಣ ಹಚ್ಚಿದಮೇಲೆ ಬಿಟ್ಟಿರೋಕಾಗಲ್ಲ. ಹಾಗೆಯೇ ಬಾಲನಟಿಯಾಗಿದ್ದ ಬಿಂದುಶ್ರೀ ಈಗ ಹೀರೋಯಿನ್ ಆಗಿ ರೀ ಎಂಟ್ರಿ ಕೊಡ್ತಿದ್ದು, ಸ್ಯಾಂಡಲ್ವುಡ್ ನಲ್ಲಿ ದೊಡ್ಡ ನಟಿಯಾಗಿ ಬೆಳೆಯಲಿ ಅನ್ನೋದು ನಮ್ಮ ಆಶಯ.
ಲಡ್ಡು ಸಿನಿಮಾದ ನನ್ನ್ ಲೈಫನಲ್ಲಿ ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಕೇಳುಗರ ಮನುಗೆದ್ದಿದೆ